banner1

ಶುಭಸ್ಯ ಶೀಘ್ರಂ

ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ||
ಕಂಠೇ ಬದ್ನಾಮಿ ಸುಭಗೇ ತ್ವಂ ಜೀವ ಶರದಾಂ ಶತಮ್||
ಮಂತ್ರೋದ್ಗಾರ, ಮಂಗಳವಾದ್ಯದೊಂದಿಗೆ ಮಾಂಗಲ್ಯಧಾರಣೆ ಮಾಡಿ ಸತಿ – ಪತಿಗಳಾದಗ ಅಲ್ಲಿ ನೆರೆದಿರುವವರ ಪರಿಪೂರ್ಣ ಆಶೀರ್ವಾದದ ಸುರಿಮಳೆ ಅಕ್ಷತೆಯ (ಕ್ಷತ – ತುಂಡು, ಒಡಕು, ಅಕ್ಷತೆ – ತುಂಡು ಅಥವಾ ಒಡಕು ಇಲ್ಲದಿರುವ ಪರಿಪೂರ್ಣವಾದ) ರೂಪದಲ್ಲಿ ನವ ದಂಪತಿಗಳ ಮೇಲೆ ಬೀಳುವ ಆ ಸಂಭ್ರಮದ ಕ್ಷಣಕ್ಕಾಗಿ ಹೆತ್ತವರ ನಿರೀಕ್ಷೆ, ಪ್ರಯತ್ನ ಬಹಳಷ್ಟಿರುತ್ತದೆ.
ವಿವಾಹ ಎನ್ನುವುದು ಷ್ಹೋಡಶ (16) ಸಂಸ್ಕಾರಗಳಲ್ಲಿ ಒಂದು. ಇಲ್ಲಿ ಕೇವಲ ಎರಡು ಜಾತಕಗಳ ಹೊಂದಾಣಿಕೆ ಮಾತ್ರವಲ್ಲ, ಎರಡು ವ್ಯಕ್ತಿತ್ವಗಳು ಕೊನೆ ಉಸಿರಿನವರೆಗೊ ಒಬ್ಬರಿಗೊಬ್ಬರು ಜೊತೆಗಿರುವೆವು ಎನ್ನುವ ಭರವಸೆಯ ಪ್ರತೀಕ. ಜೊತೆಗೆ ಎರಡು ಕುಟುಂಬಗಳ ನಡುವೆ ಭಾಂಧವ್ಯದ ಬೆಸೆಯುವಿಕೆ.
ಪ್ರತಿಯೊಂದು ಜೋಡಿಯು ಸ್ವರ್ಗದಲ್ಲೇ ನಿರ್ಧರಿತ ಎನ್ನುವುದು ಅಲೌಕಿಕವಾದ ವಿಚಾರವಾದರೂ, ತಮ್ಮ ಮಕ್ಕಳಿಗೆ ಪ್ರಾಪ್ತ ವಯಸ್ಸಿನಲ್ಲಿ ಎಲ್ಲಾ ರೀತಿಯಲ್ಲೂ ಅನುರೂಪವಾದ ಜೋಡಿಯನ್ನು ಹುಡುಕಿ ಅವರ ವಿವಾಹವನ್ನು ನೆರವೇರಿಸ ಬೇಕೆಂಬುದು ಪ್ರತಿಯೊಬ್ಬ ತಂದೆ – ತಾಯಿಯ ಜೀವಮಾನದ ಕನಸಾಗಿರುತ್ತದೆ.
ಇಂತಹ ಕನಸಿನ ಸಾಕಾರಕ್ಕಾಗಿ ಹಾಗೂ ಸಮಾಜದ ವಿವಾಹಾಪೇಕ್ಷಿಗಳಿಗೆ ಅನುಕೂಲವಾಗಲೆಂದು ಆರಂಭಿಸಿರುವ ಈ ಜಾಲತಾಣದ ಸದುಪಯೋಗ ಪಡೆದು ಶೀಘ್ರ ಕಲ್ಯಾಣ ಪ್ರಾಪ್ತರಾಗಿ ಎಂದು ಹಾರೈಸುತ್ತೇವೆ.

ರೂಪ ಸುಧೀರ್
ಕುಬೇವೂರು, ಮುಲ್ಕಿ

The personal data / image / information of brides and bridegrooms should not be copied, disclosed or shared in whole or in part in any form with third parties. This website is strictly for matrimonial purposes only and not a dating website.